ಪೇಜಾವರ ಮಠವು ಉಡುಪಿಯ ಅಷ್ಟ ಮಠಗಳಲ್ಲಿ ಒಂದಾಗಿದೆ, ಇದನ್ನು ಹಿಂದೂ ತತ್ವಶಾಸ್ತ್ರದ ದ್ವೈತ ಶಾಲೆಯ ಸ್ಥಾಪಕರಾದ ಶ್ರೀ ಮಧ್ವಾಚಾರ್ಯರ ಶಿಷ್ಯರಾಗಿದ್ದ ಶ್ರೀ ಅಧೋಕ್ಷಜ ತೀರ್ಥರು ಪ್ರಾರಂಭಿಸಿದರು. ಇಲ್ಲಿಯವರೆಗೆ ೩೨ ಸ್ವಾಮೀಜಿಗಳು ಈ ಮಠದ ನೇತೃತ್ವವನ್ನು ವಹಿಸಿದ್ದಾರೆ. ಪ್ರಸ್ತುತ ಪೇಜಾವರ ಮಠದ ಸ್ವಾಮೀಜಿ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು. ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು ೨೯ ಡಿಸೆಂಬರ್ ೨೦೧೯ ರಂದು ತಮ್ಮ ಗುರುಗಳಾದ ಶ್ರೀ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಯವರ ದೇಹತ್ಯಾಗದ ಬಳಿಕ ಪೀಠವನ್ನು ಅಲಂಕರಿಸಿದರು. == ಪೇಜಾವರ ಗುರು ಪರಂಪರೆ == ಮಧ್ವಾಚಾರ್ಯರು(೧೧೯೯-೧೨೩೮) ಅಧೋಕ್ಷಜ ತೀರ್ಥ(೧೨೭೮-೧೨೯೬)(ಧನುಷ್ಕೋಡಿ) ಕಮಲಾಕ್ಷ ತೀರ್ಥ(೧೨೯೬-೧೩೧೩)(ಗಂಗಾ ನದಿಯ ದಡ) ಪುಷ್ಕರಾಕ್ಷ ತೀರ್ಥ(೧೩೧೩-೧೩೩೫)(ಗಂಗಾ ನದಿಯ ದಡ) ಅಮರೇಂದ್ರ ತೀರ್ಥ (೧೩೩೫-೧೩೫೯) (ಮೂಲ ಕಾವೇರಿ) ಮಹೇಂದ್ರ ತೀರ್ಥ (೧೩೫೯-೧೩೮೧) (ಗೋದಾವರಿ) ವಿಜಯಧ್ವಜ ತೀರ್ಥ(೧೩೮೧-೧೪೧೦) (ಕಣ್ವ ತೀರ್ಥ) ಉತ್ತಮ ತೀರ್ಥ(೧೪೧೦-೧೪೧೨) ಚಿಂತಾಮಣಿ ತೀರ್ಥ(೧೪೧೨-೧೪೨೪) (ಕಣ್ವ ತೀರ್ಥ) ದಾಮೋದರ ತೀರ್ಥ(೧೪೨೪-೧೪೫೭)(ಉಡುಪಿ) ವಾಸುದೇವ ತೀರ್ಥ (೧೪೫೭-೧೪೭೫) (ಗಂಗಾ ನದಿಯ ದಡ) ವದೀಂದ್ರ ತೀರ್ಥ(೧೪೭೫-೧೪೮೨) (ಮೂಲ ಕಾವೇರಿ) ವೇದಗರ್ಭ ತೀರ್ಥ(೧೪೮೨-೧೪೯೫)(ವೃಂದಾವನ) ಅನುಪ್ರಜ್ಞಾ ತೀರ್ಥ(೧೪೯೫-೧೫೨೦)(ಪುರಿ) ವಿಶ್ವಪ್ರಜ್ಞಾ ತೀರ್ಥ(೧೫೨೦-೧೫೩೭)(ನಾಸಿಕ್) ವಿಜಯ ತೀರ್ಥ(೧೫೩೭-೧೫೪೨)(ವೃಂದಾವನ) ವಿಶ್ವೇಶ್ವರ ತೀರ್ಥ(೧೫೪೨-೧೫೫೨) (ಪ್ರೋಷ್ಟಿ) ವಿಶ್ವಭೂಷಣ ತೀರ್ಥ(೧೫೫೨-೧೬೦೩)(ರಾಮನಾಥಪುರ, ಹಾಸನ) ವಿಶ್ವವಂದ್ಯ ತೀರ್ಥ(೧೬೦೩-೧೬೫೨)(ಕೂಡ್ಲಿ) ವಿದ್ಯಾರಾಜ ತೀರ್ಥ (೧೬೫೨-೧೬೭೮) (ಶ್ರೀರಂಗಂ) ವಿಶ್ವಮೂರ್ತಿ ತೀರ್ಥ(೧೬೭೮-೧೭೦೮)(ಪೇಜಾವರ) ವಿಶ್ವಪತಿ ತೀರ್ಥ (೧೭೦೮-೧೭೩೬) (ಗಂಗಾ ನದಿಯ ದಡ) ವಿಶ್ವನಿಧಿ ತೀರ್ಥ(೧೭೩೬-೧೭೪೮)(ಉಡುಪಿ) ವಿಶ್ವಧೀಶ ತೀರ್ಥ(೧೭೪೮-೧೭೭೮)(ಉಡುಪಿ) ವಿಶ್ವಾಧಿರಾಜ ತೀರ್ಥ(೧೭೭೮-೧೮೧೪)(ಉಡುಪಿ) ವಿಶ್ವಬೋಧ ತೀರ್ಥ(೧೮೧೪-೧೮೩೯)(ಪೇಜಾವರ) ವಿಶ್ವವಲ್ಲಭ ತೀರ್ಥ (೧೮೩೯-೧೮೬೪) (ಮುಳಬಾಗಿಲು) ವಿಶ್ವಪ್ರಿಯ ತೀರ್ಥ(೧೮೬೪-೧೮೭೩)(ಉಡುಪಿ/ಪೇಜಾವರ) ವಿಶ್ವವರ್ಯ ತೀರ್ಥ(೧೮೭೩-೧೮೭೫)(ಪೆರ್ಣಂಕಿಲ) ವಿಶ್ವರಾಜ ತೀರ್ಥ(೧೮೭೫-೧೮೮೦)(ಪೆರ್ಣಂಕಿಲ) ವಿಶ್ವಮನೋಹರ ತೀರ್ಥ(೧೮೮೦-೧೮೮೬)(ಪೆರ್ಣಂಕಿಲ) ವಿಶ್ವಜ್ಞ ತೀರ್ಥ(೧೮೮೬-೧೯೧೯)(ಉಡುಪಿ) ವಿಶ್ವಮಾನ್ಯ ತೀರ್ಥ (೧೯೧೯-೧೯೫೨) (ಕಣ್ವ ತೀರ್ಥ) ವಿಶ್ವೇಶ ತೀರ್ಥ(೧೯೫೨-೨೦೧೯)(ಪೂರ್ಣಪ್ರಜ್ಞಾ ವಿದ್ಯಾಪೀಠ, ಬೆಂಗಳೂರು) ವಿಶ್ವಪ್ರಸನ್ನ ತೀರ್ಥ(೨೦೧೯-) == ಪೂರಕ ಓದಿಗೆ == ಉಡುಪಿ ಶ್ರೀಕೃಷ್ಣ ಮಠ ದ್ವೈತ ದರ್ಶನ ದ್ವೈತ ಸಾಹಿತ್ಯ == ಉಲ್ಲೇಖಗಳು ==